Languages
previous arrow
next arrow
Slider

ಗ್ರಾಮೀಣ ಭಾಗದ ಬಡವರು, ವಿಕಲಚೇತನರು, ವಯಸ್ಕರು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯ ಆರ್ಥಿಕ ಸಹಕಾರದೊಂದಿಗೆ ಅವರ ಮನೋಸ್ಥೈರ್ಯ ಹೆಚ್ಚಿಸುವ ಮತ್ತು ಜೀವನಮಟ್ಟವನ್ನು ಸುಧಾರಣೆಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಸಮಾಜವ ವಿವಿಧ ಸೇವಾ ಕಾರ್ಯಗಳಿಗೆ ನೆರವಾಗುವ ಉದ್ದೇಶದೊಂದಿಗೆ ಜನ್ಮತಾಳಿದ ಸಂಸ್ಥೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ.’

ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬ ಗಾದೆ ಮಾತಿನಂತೆ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾದವರು ತಮ್ಮ ಗಳಿಕೆಯ ಸಣ್ಣ ಪಾಲನ್ನು ಸಮಾಜಮುಖಿ ಕೈಕರ್ಯಗಳಿಗೆ ವಿನಿಯೋಗಿಸಲು ಈ ಸಂಸ್ಥೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ. ಸಮಾಜಮುಖಿ ಚಿಂತನೆಯಿಂದ ಹುಟ್ಟಿಕೊಂಡ ನಮ್ಮ ಸಂಸ್ಥೆ ವೈಯಕ್ತಿಕ, ರಾಜಕೀಯ ಭಿನ್ನಾಭಿಪ್ರಾಯ ಹಾಗೂ ಯಾವುದೇ ರೀತಿಯ ಒತ್ತಡಕ್ಕೂ ಒಳಗಾಗದೇ ನಿಸ್ಪಕ್ಷಪಾತವಾಗಿ ಸಮಾಜದ ಒಡವರ, ದುರ್ಬಲರ ಸೇವೆ ಮಾಡಲು ಸಂಕಲ್ಪಿಸಿದೆ.

ನಮ್ಮ ಧ್ಯೇಯ


ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಅದೆಷ್ಟೋ ಪ್ರತಿಭಾವಂತ ವಿದಾರ್ಥಿಗಳ ಪ್ರತಿಭೆ ಚಿಗುರೊಡೆಯುವ ಮುನ್ನವೇ ಕಮರಿ ಹೋಗುತ್ತಿದೆ. ನಮ್ಮ ಟ್ರಸ್ಟ್ ಅಂತಹ ಪ್ರತಿಭಾವಂತ ವಿದಾರ್ಥಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ, ಶಿಕ್ಷಣ ಸಂಬಂಧಿತ ನೆರವು ಹಾಗೂ ಆರ್ಥಿಕ ಸಹಕಾರ ನೀಡುವುದರ ಮೂಲಕ ಅವರ ಪ್ರತಿಭೆಯನ್ನು ಬೆಳಗಿಸಲು ಸಂಕಲ್ಪತೊಟ್ಟಿದೆ.


ಅನಾಥ ಮಕ್ಕಳಿಗೆ ಸಹಾಯಹಸ್ತ

ಅನಾರೋಗ್ಯ, ಅಪಘಾತಗಳಿಂದಾಗಿ ತಂದೆ ತಾಯಿಗಳನ್ನು ಕಳೆದುಕೊಂಡ ಮಕ್ಕಳನ್ನು ಗುರುತಿಸಿ ಸಂಕಷ್ಟ ಕಾಲದಲ್ಲಿ ನೆರವಾಗುವ ಹಾಗೂ ಅವರ ಮುಂದಿನ ಬದುಕಿಗೆ ಸೂಕ್ತ ನೆಲೆ ಕಲ್ಪಿಸುವ ಬಗ್ಗೆ ನಮ್ಮ ಟ್ರಸ್ಟ್ ಸಂಕಲ್ಪತೊಟ್ಟಿದೆ. ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಲ್ಲದೇ ಜೀವನ ಮಟ್ಟ ಸುಧಾರಣೆಗೆ ಟ್ರಸ್ಟ್ ನೆರವಾಗುತ್ತದೆ.


ವಿಕಲಚೇತನರಿಗೆ ನೆರವು

ದೈಹಿಕ ಹಾಗೂ ಮಾನಸಿಕ ನ್ಯೂನ್ಯತೆಯಿಂದ ವಿಕಲಚೇತನರು ಮುಖ್ಯವಾಹಿನಿಯಿಂದಲೇ ದೂರ ಸರಿಯುತ್ತಾರೆ. ಅಂತವರಿಗೆ ಅಗತ್ಯ ನೆರವು ನೀಡಿ ಅವರಲ್ಲಿನ ಮನೋಸ್ಥೈರ್ಯವನ್ನು ಹೆಚ್ಚಿಸಿ ಮುಖ್ಯವಾಹಿನಿಯಲ್ಲಿ ಬದುಕವಂತೆ ಮಾಡುವ ಜವಾಬ್ದಾರಿ ನಾಗರೀಕ ಸಮಾಜದ ನಮ್ಮೆಲ್ಲರದ್ದೂ ಆಗಿದ್ದು, ಆ ನೆಲೆಯಲ್ಲಿ ಟ್ರಸ್ಟ್ ಕಾರ್ಯಾಚರಿಸುತ್ತದೆ. 


ವಯಸ್ಕರು, ವೃದ್ಧಾಶ್ರಮಗಳಿಗೆ ನೆರವು

ವಯಸ್ಕ ತಂದೆ ತಾಯಿಯರ ಪೋಷಣೆಯೂ ಮಕ್ಕಳಿಗೆ ಹೊರೆಯೆನಿಸುತ್ತಿರುವ ಕಾಲಘಟ್ಟವಿದು. ಇಳಿ ವಯಸ್ಸಿನಲ್ಲಿ ಮಕ್ಕಳ ಪ್ರೀತಿಯಿಂದ ವಂಚಿತರಾಗುವ ಪೋಷಕರು ವೃದ್ಧಾಶ್ರಮಗಳಲ್ಲಿ ಕಾಲಕಳೆಯುತ್ತಿದ್ದು, ಅಂತವರ ಮನೋಲ್ಲಾಸ ಹಾಗೂ ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ಹಿರಿಯರಿಗೆ ಸಕಾಲದಲ್ಲಿ ಅಗತ್ಯ ನೆರವು ನೀಡಲು ಟ್ರಸ್ಟ್ ಉದ್ದೇಶಿಸಿದೆ.


ಪುರಾತನ ದೇವಾಲಯಕ್ಕೆ ದೇಣಿಗೆ

ದೇಗುಲ ಮತ್ತು ಶಾಲೆ ಊರಿನ ಎರಡು ಕಣ್ಣುಗಳಿದ್ದಂತೆ. ಇವೆರಡು ಸುಸ್ಥಿತಿಯಲ್ಲಿದ್ದರೇ ಆ ಊರು ಅಭಿವೃದ್ಧಿಯತ್ತ ಸಾಗುತ್ತದೆ ಎನ್ನುತ್ತಾರೆ. ಅಂತೆಯೇ ಶ್ರೀ ವರಲಕ್ಷ್ಮೀ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ದೇವಾಲಯಗಳ ಜೀರ್ಣೋದ್ದಾರ ಕಾರ್ಯಗಳಿಗೆ ಸಹಕಾರ ನೀಡಲು ಬದ್ಧವಾಗಿದೆ .


ಸೇವಾ, ಶೈಕ್ಷಣಿಕ ಕಾರ್ಯಗಳಿಗೆ ಸಹಾಯ

ಸಮಾಜದಲ್ಲಿ ಹಲವು ಸಂಘ ಸಂಸ್ಥೆಗಳು ಸದುದ್ದೇಶದೊಂದಿಗೆ ಹತ್ತಾರು ಸೇವಾ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಜಾತಿ, ಧರ್ಮವನ್ನು ಮೀರಿ ಅಗತ್ಯವುಳ್ಳವರಿಗೆ ನೆರವು, ಸಹಕಾರ ನೀಡುತ್ತಿದ್ದಾರೆ. ನಮ್ಮ ಟ್ರಸ್ಟ್ ಅಂತಹ ಅರ್ಹ ಸಂಘ ಸಂಸ್ಥೆಗಳ ಸೇವಾ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ನಿಧಿಗೆ ನೆರವು ನೀಡಲಿದೆ.

ಉತ್ತಮ ಉದ್ದೇಶಕ್ಕಾಗಿ ನಮ್ಮೊಂದಿಗೆ ಜೋಡಿಸಿ

ಸಮಾಜದ ಬಡವರು, ನಿರಾಶ್ರಿತರು, ವಿಕಲಚೇತರು, ಅರ್ಹ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸೇವಾ, ಧಾರ್ಮಿಕ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುತ್ತಿರುವ ನಮ್ಮ ಸಂಸ್ಥೆಗೆ ನೀವೂ ನೆರವಾಗಬಹುದು.

ಟ್ರಸ್ಟಿಗಳು

ಗೋವಿಂದ ಬಾಬು ಪೂಜಾರಿ
ಮ್ಯಾನೆಜಿಂಗ್ ಟ್ರಸ್ಟೀ
ಮಾಲತಿ ಗೋವಿಂದ ಪೂಜಾರಿ
ಟ್ರಸ್ಟೀ