Languages

ಮೂಡುಮಠ ಸುರೇಶ್ ಪೂಜಾರಿ ಕುಟುಂಬಕ್ಕೆ ಸಹಾಯಧನ ಹಸ್ತಾಂತರ

  • June 25, 2019
  • By Admin: Sri Varalaxmi Charitable Trust R.
  • Comments: Comments off

ನಾಗೂರಿನ ಉಪ್ರಳ್ಳಿ ಮೂಡುಮಠ ನಿವಾಸಿ ಸುರೇಶ್ ಪೂಜಾರಿ ಎಂಬುವವರು ಇತ್ತೀಚಿಗೆ ನಾಗೂರಿನ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತಿದ್ದ ಸಮಯದಲ್ಲಿ ಅವರ ಮೇಲೆ ಲಾರಿಯೊಂದು ಹಾಯ್ದು ಅಪಘಾತವಾಗಿ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಅರೆಕೋಮಾವಸ್ಥೆಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಆರ್ಥಿಕವಾಗಿ ತೀರಾ ಹಿಂದುಳಿದ ಅವರ ವೈದ್ಯಕೀಯ ವೆಚ್ಚಕ್ಕಾಗಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನಿಂದ 15ಸಾವಿರ ರೂ. ಸಹಾಯಧನದ ಚೆಕ್ ವಿತರಿಸಲಾಯಿತು.