Languages

ಟ್ರಸ್ಟ್‌ನ 4ನೇ ವಾರ್ಷಿಕೋತ್ಸವ

  • May 9, 2019
  • By Admin: Sri Varalaxmi Charitable Trust R.
  • Comments: Comments off

ಎಲ್ಲರಿಗೂ ಬದುಕಿಗಾಗಿ ದುಡಿಮೆ ಅನಿವಾರ್ಯ. ಅವರಲ್ಲಿ ಅಗತ್ಯಕ್ಕಿಂತ ಅಧಿಕ ಆದಾಯ ಇರುವವರು ಅದರ ಒಂದಂಶವನ್ನು ಸಮುದಾಯದಲ್ಲಿ ಕನಿಷ್ಠ ಸ್ಥಿತಿಯಲ್ಲಿರುವವರ ಬದುಕಿಗಾಗಿ ತ್ಯಾಗ ಮಾಡುವುದು ಮಾನವೀಯ ಔದಾರ್ಯ ಎನಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಂದನವನ ದೇವಕಿ ಬಿ. ಆರ್. ಸಭಾಭವನದಲ್ಲಿ ಗುರುವಾರ ನಡೆದ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಚತುರ್ಥ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಟ್ರ್ರಸ್ಟ್ ಗ್ರಾಮೀಣ ಭಾಗದ ಜನರ ಶಿಕ್ಷಣ, ಆರೋಗ್ಯದ ಅವಶ್ಯಕತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ. ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಟ್ರಸ್ಟ್ ಸ್ಥಾಪಿಸಿರುವ ಗೋವಿಂದ ಬಾಬು ಪೂಜಾರಿ ಬಡತನದಲ್ಲಿ ಹುಟ್ಟಿ ಬೆಳೆದರು. ಬಾಲ್ಯದಲ್ಲಿ ನೋವು ಅನುಭವಿಸಿದವರು. ಹೋಟೆಲ್ ನೌಕರನಾಗಿ ಬದುಕು ಆರಂಭಿಸಿದ ಅವರು ಸತತ ಕಠಿಣ ಶ್ರಮ, ಛಲದಿಂದ ಇಂದು ೪೫೦೦ ಜನರಿಗೆ ಉದ್ಯೋಗ ನೀಡುವ ಕ್ಯಾಟರಿಂಗ್ ಉದ್ಯಮದ ಒಡೆಯ. ಬಡತನದ ಕಾಠಿಣ್ಯಗಳನ್ನು ಅನುಭವಿಸಿ ಬೆಳೆದ ಅವರಂತವರಿಂದ ಮಾತ್ರ ಸಮುದಾಯ ಪರ ಕಾರ್ಯ ನಡೆಯುತ್ತದೆ. ಅವರ ಕೊಡುಗೆ ಅನನ್ಯ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ತನ್ನ ಬದುಕಿನ ಘಟ್ಟಗಳನ್ನು ಸ್ಮರಿಸಿಕೊಂಡರು. ತನ್ನ ಕ್ಯಾಟರಿಂಗ್ ಸಂಸ್ಥೆಯಲ್ಲಿ ಎರಡು ಜಿಲ್ಲೆಗಳ ಸುಮಾರು 600 ಜನರಿಗೆ ಉದ್ಯೋಗ ನೀಡಲಾಗಿದೆ. ಮುಂದೆ ಊರಿನಲ್ಲೇ ಜನರಿಗೆ ಉದ್ಯೋಗ ಕಲ್ಪಿಸುವ ಯಾವುದಾದರೂ ಯೋಜನೆ ರೂಪಿಸುವ ಹಂಬಲವಿದೆ ಎಂದ ಅವರು ಇದಕ್ಕೆ ಎಲ್ಲರ ಸಹಕಾರ ಕೋರಿದರು.

ಶಿಕ್ಷಣ, ಸ್ಥಳೀಯಾಡಳಿತ, ಸಮುದಾಯ ಅಭಿವೃದ್ಧಿಯ ಸಾಧಕ ಎಸ್. ಜನಾರ್ದನ ಮರವಂತೆ, ಅಂಗನವಾಡಿ ಸಹಾಯಕಿ ದಾರು ದೇವಾಡಿಗ, ಯಶಸ್ವಿ ಉದ್ಯಮಿ ಅರಾಟೆ ರಾಮ ಗಾಣಿಗ ಅವರನ್ನು ಸಮ್ಮಾನಿಸಲಾಯಿತು. ಬಿಜೂರು ಸಹಿಪ್ರಾ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ದೇಣಿಗೆಯಾಗಿ ಒಂದು ಲಕ್ಷ ರೂ.ಗಳನ್ನು ನೀಡಲಾಯಿತು. ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ರಚಿಸಿರುವ ಸ್ವಸಹಾಯ ಸಂಘಗಳ 120 ಸದಸ್ಯರಿಗೆ ತಲಾ ರೂ. ಒಂದು ಲಕ್ಷ ಮಿತಿಯ ಆರೋಗ್ಯ ವಿಮಾಪತ್ರಗಳನ್ನು, 25ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಮತ್ತು 7 ಜನ ಅಶಕ್ತರಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು.

ಜಿಲ್ಲಾ ವ್ಯಾಪ್ತಿಯ ಭಗವದ್ಗೀತಾ ಅಭಿಯಾನದ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್, ಟ್ರಸ್ಟಿ ಮಾಲತಿ ಗೋವಿಂದ ಪೂಜಾರಿ, ಕುಂದಾಪುರ ಮಾತಾ ಆಸ್ಪತ್ರೆಯ ಡಾ. ಸತೀಶ ಪೂಜಾರಿ, ಜಿಪಂ ಸದಸ್ಯೆ ಗೌರಿ ದೇವಾಡಿಗ ಉಪಸ್ಥಿತದ್ದರು. ಟ್ರ್ರಸ್ಟ್‌ನ ಸದಸ್ಯ, ಪತ್ರಕರ್ತ ನರಸಿಂಹ ನಾಯಕ್ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Trust 4th AnniversaryTrust 4th Anniversary Trust 4th Anniversary cultural ProgramTrust 4th Anniversary cultural Program