Languages

ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಗೆ ದೇಣಿಗೆ

  • December 2, 2019
  • By Admin: Sri Varalaxmi Charitable Trust R.
  • Comments: Comments off

ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಸೋಮವಾರ ಭೇಟಿ ನೀಡಿ ಸಂಸ್ಥೆಗೆ ದೇಣಿಗೆ ಹಸ್ತಾಂತರಿಸಿದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಅವರು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಅವರಿಗೆ ರೂ. ೨೫,೦೦೦ದ ಚೆಕ್ ಹಸ್ತಾಂತರಿಸಿದರು. ಶಾಲೆಯ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್ ವಿತರಿಸಿದರಲ್ಲದೇ ಮಧ್ಯಾಹ್ನದ ಭೊಜನ ವ್ಯವಸ್ಥೆಯನ್ನು ಮಾಡಿಸಿದ್ದರು.

ಈ ಸಂದರ್ಭ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಮಾಲತಿ ಗೋವಿಂದ ಪೂಜಾರಿ, ರಾಮ ಬಿಜೂರು, ಸದಸ್ಯರಾದ ಸುಧಾಕರ ಪೂಜಾರಿ, ರಾಘವೇಂದ್ರ ಪೂಜಾರಿ, ನರಸಿಂಹ ಬಿ. ನಾಯಕ್, ಪಾರ್ವತಿ ಪೂಜಾರಿ, ನಾಗರಾಜ್, ವಿಲಿಯಂ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ಮನೊರಮಾ ತಲ್ಲೂರು ಮತ್ತಿತರರು ಇದ್ದರು.