Languages

ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಅಡುಗೆ ಕೋಣೆ, ಅಡುಗೆ ಸಲಕರಣೆ ಕೊಡುಗೆ

  • February 4, 2020
  • By Admin: Sri Varalaxmi Charitable Trust R.
  • Comments: Comments off

ತಲ್ಲೂರು ಫ್ಯಾಮಿಲಿ ಟ್ರಸ್ಟ್ ರಿ. ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆ ಇದರ ವಾರ್ಷಿಕೋತ್ಸವ ಸಂದರ್ಭ ಶಾಲೆಯ ಮಧ್ಯಾಹ್ನದೂಟದ ಅಡುಗೆ ಕೋಣೆ ಹಾಗೂ ಅಡುಗೆ ಸಲಕರಣೆಗಳನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒದಗಿಸಿಕೊಡಲಾಯಿತು.

ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರ ಹೆತ್ತವರಾದ ಬಾಬು ಪೂಜಾರಿ ಮಂಜಮ್ಮ ದಂಪತಿಗಳು ಉದ್ಘಾಟಿಸಿದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಬದುಕಿನಲ್ಲಿ ಕಷ್ಟಪಟ್ಟು ಬೆಳೆದು ಬಂದು ತನಗೆ ಸಮಾಜದಲ್ಲಿ ಆರ್ಥಿಕ ಅಗತ್ಯವುಳ್ಳವರಿಗೆ ಸ್ಪಂದಿಸುವುದರಲ್ಲಿ ಸಂತೋಷವಿದೆ. ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವೂ ಆಗಿದ್ದು, ಆ ದಿಸೆಯಲ್ಲಿ ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಅಡುಗೆ ಕೋಣೆ ನಿರ್ಮಿಸುವ ಭರವಸೆ ನೀಡಿದ್ದೆ. ಅದೀಗ ನೆರವೇರಿರುವುದು ಖುಷಿ ತಂದಿದೆ. ಮುಂದೆಯೂ ಶಾಲೆಯ ವಿಶೇಷ ಮಕ್ಕಳ ಅಗತ್ಯತೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಸೆಲ್ಕೊ ಇಂಡಿಯಾದ ಜನರಲ್ ಮ್ಯಾನೆಜರ್ ಜಗದೀಶ ಪೈ, ಸೆಲ್ಕೋ ಇಂಡಿಯಾ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಗುರು ಪ್ರಕಾಶ್ ಶೆಟ್ಟಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಕರಣ್ ಕುಮಾರ್ ಪೂಜಾರಿ, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಸುರೇಶ್ ತಲ್ಲೂರು ಟ್ರಸ್ಟೀ ರಾಜಾರಾಮ ತಲ್ಲೂರು, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮಾಲತಿ ಗೋವಿಂದ ಪೂಜಾರಿ, ಪ್ರೇಮಾ ಲೂವಿಸ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.