Languages

ಟ್ರಸ್ಟ್ ವತಿಯಿಂದ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿ ವಿತರಣೆ

  • March 29, 2020
  • By Admin: Sri Varalaxmi Charitable Trust R.
  • Comments: Comments off

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ವತಿಯಿಂದ ಮಾ.28ರ ಶುಕ್ರವಾರ ಹಾಗೂ ಮಾ.29ರ ಶನಿವಾರ ವಿವಿಧ ಗ್ರಾಮಗಳ ಅಗತ್ಯವುಳ್ಳ ಸಾರ್ವಜನಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಬೈಂದೂರು ತಾಲೂಕಿನ ಎಲ್ಲೂರು, ಗೋಳಿಹೊಳೆ, ಬೈಂದೂರು, ಉಪ್ಪುಂದ, ಹೆರಂಜಾಲು, ಬಿಜೂರು ಗ್ರಾಮಗಳಲ್ಲಿ ಅಗತ್ಯವುಳ್ಳ ಕುಟುಂಬಕ್ಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ಆಹಾರ ಸಾಮಾಗ್ರಿ ಕಿಟ್‌ನಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಚಹಾಪುಡಿ, ಅಡುಗೆ ಎಣ್ಣೆ ಸೇರಿದ್ದವು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.