Languages

ಇಡೂರು: ಟ್ರಸ್ಟ್ ವತಿಯಿಂದ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿ ವಿತರಣೆ

  • April 17, 2020
  • By Admin: Sri Varalaxmi Charitable Trust R.
  • Comments: Comments off

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ವತಿಯಿಂದ ಎ.17ರ ಶುಕ್ರವಾರ ಮಾರಣಕಟ್ಟೆ ಸಮೀಪದ ಇಡೂರು ಜನತಾ ಕಾಲೋನಿಯ 25ಕ್ಕೂ ಹೆಚ್ಚು ಅಗತ್ಯವುಳ್ಳ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಕಿಟ್ನಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಚಹಾಪುಡಿ, ಅಡುಗೆ ಎಣ್ಣೆ ಸೇರಿದ್ದವು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.