Languages

ಬಿಜೂರು ಸರಕಾರಿ ಪ್ರೌಢಶಾಲೆಗೆ ಶಾಲೆಗೆ ಗ್ಯಾಸ್ ರೇಂಜ್‌ ಕೊಡುಗೆ

  • January 20, 2020
  • By Admin: Sri Varalaxmi Charitable Trust R.
  • Comments: Comments off

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಬಿಜೂರು ಸರಕಾರಿ ಪ್ರೌಢಶಾಲೆಗೆ 30,000ರೂ. ಮೌಲ್ಯದ ಗ್ಯಾಸ್ ರೇಂಜ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಬಿಜೂರು ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿ ಶಾಲಾ ಮುಖ್ಯೋಪಧ್ಯಾಯರಾದ ಸುಬ್ರಹ್ಮಣ್ಯ ಮದ್ದೋಡಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಟ್ರಸ್ಟೀ ರಾಮ ಬಿಜೂರು, ಎಸ್‌ಡಿಎಂಸಿ ಅಧ್ಯಕ್ಷ ರಾಜೇಂದ್ರ ಬಿಜೂರು, ಎಸ್‌ಡಿಎಂಸಿ ಸದಸ್ಯರುಗಳಾ ಸುರೇಶ್ ಬಿಜೂರು, ಉಮೇಶ್ ದೇವಾಡಿಗ, ತಿಮ್ಮಪ್ಪ ದೇವಾಡಿಗ ಹಾಗೂ ಇತರರರು ಉಪಸ್ಥಿತರಿದ್ದರು.