Languages

ಸಾಧನೆಗೆ ಬಡತನ ಅಡ್ಡಿಯಾಗಲಾರದು. ವ್ಯಕ್ತಿಯೊಬ್ಬ ತಮ್ಮ ಬದುಕಿನಲ್ಲಿ ನಿರ್ದಿಷ್ಟ ಗುರು, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡಾಗ ಸಾಧಕನಾಗಲು ಸಾಧ್ಯ. ತಮ್ಮ ಬಾಲ್ಯ ಜೀವನದಲ್ಲಿ ಮೂರು ಹೊತ್ತಿನ ತುತ್ತಿಗೂ ಪರದಾಟ ಅನುಭವಿಸಿದ ಅದೆಷ್ಟೋ ಜನರು ಇಂದು ಸಾಧಕರಾಗಿ ನಮ್ಮ ಕಣ್ಮುಂದೆ ಇದ್ದಾರೆ. ಅವರ ಸಾಲಿಗೆ ಸೇರ್ಪಡೆಗೊಂಡವೇ ಶ್ರೀ ವರಲಕ್ಷ್ಮೀ ಚಾರಟೇಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ .

ಬೈಂದೂರು ತಾಲೂಕು ಶಿರೂರು ಗ್ರಾಮದ ಮೇಲ್ಪಂಕ್ತಿ ದೊಡ್ಡಮನೆ ಶ್ರೀ ಬಾಬು ಪೂಜಾರಿ ಹಾಗೂ ಶ್ರೀಮತಿ ಮಂಜಮ್ಮ ದಂಪತಿಗಳ ಪುತ್ರರಾಗಿ 1977ರಲ್ಲಿ ಬಿಜೂರಿನಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೇ ಬಡತನವನ್ನು ಅನುಭವಿಸಿದವರು. ಅದರ ನಡುವೆಯೋ ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗಿ ಬೆಳೆದು ಸಮಾಜಕ್ಕೆ ಏನನ್ನಾದರೂ ನೀಡಬೇಕು ಹಾಗೂ ಸಮಾಜಮುಖಿ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಕನಸನ್ನು ಕಂಡಿದ್ದರು. ತಾನು ಕಂಡ ಕನಸನ್ನು ನನಸಾಗಿಸಿಕೊಳ್ಳಬೇಕೆಂಬ ಹೆಬ್ಬಯಕೆಯೊಂದಿಗೆ ಹೋರಾಡಿದ ಘಲವಾಗಿ ತಿಂಗಳಿಗೆ 700 ರೂ. ಸಂಬಳ ಪಡೆಯುತ್ತಿದ್ದ ಅವರು ಇಂದು ಸಾವಿರಾರು ಜನರಿಗೆ ಬದುಕು ಕಲ್ಪಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ.

ಕೃಷಿ ಕುಟುಂಬದಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ ಅವರಿಗೆ ಬಾಲ್ಯದಲ್ಲಿ ಬಡತನ ಕಂಡಿದ್ದರು. ಆದರೆ ಶಿಕ್ಷಣ ಬಗೆಗೆ ಅವರಲ್ಲಿ ಆಸಕ್ತಿ ಇತ್ತು. ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 4ನೇ ತರಗತಿಯ ತನಕ ಪ್ರಾಥಮಿಕ ಶಿಕ್ಷಣ ಪೂರೈಸಿ ಬಳಿಕ ಬೈಂದೂರು ಸರಕಾರಿ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ೮ನೇ ತರಗತಿಯ ತನಕದ ಶಿಕ್ಷಣವನ್ನು ಮುಗಿಸಿದರು. ಬಳಿಕ 1991ರಲ್ಲಿ ತನ್ನ ಹದಿಮೂರನೇ ವಯಸ್ಸಿಗೆ ಕುಟುಂಬದ ಜವಾಬ್ದಾರಿಯಲ್ಲಿ ಅರಿತು ಉದ್ಯೋಗ ಅರಸಿ ಮುಂಬೈ ಕಡೆಗೆ ಪ್ರಯಾಣ ಬೆಳೆಸಿದರು.ಆರಂಭದಲ್ಲಿ ಮುಂಬೈನ ನಲಾಸೋಪರ್‌ನಲ್ಲಿರುವ ಚಿಕ್ಕ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ ಅವರು ಅಲ್ಲಿ 5 ವರ್ಷಗಳ ಕಾಲ ಹಗಲು ರಾತ್ರಿ ಎನ್ನದೇ ದುಡಿದರು. ಬಳಿಕ ಬಿ.ಎಸ್.ಟಿ ಕ್ಯಾಂಟಿನ್ ಕೆಲಸಕ್ಕೆ ಸೇರಿ ದುಡಿಮೆಯನ್ನು ಮುಂದುವರಿಸಿದರು. ಅಲ್ಲಿಯೇ ಅಡಿಗೆ ತಯಾರಿಸುವುದರಲ್ಲಿ ಪರಿಣತಿ ಪಡೆದರು. ಈ ನಡುವೆ ತಮ್ಮ ಇಬ್ಬರು ಸಹೋದರಿಯ ವಿವಾಹ ನೆರವೇರಿಸಿದ ಬಳಿಕ ತಮ್ಮದೇ ಆದ ಪಾನ್ ಅಂಗಡಿಯನ್ನು ಆರಂಭಿಸಿ ಅದರಲ್ಲಿ ನಷ್ಟ ಅನುಭವಿಸಿದರು. ಆದರೆ ಅವರೆಂದೂ ಎದೆಗುಂದಲಿಲ್ಲ. ಮುಂಬೈನ ಪಂಚತಾರಾ ಹೋಟೆಲೊಂದರಲ್ಲಿ ಶೇಫ್ ಆಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಉತ್ತಮ ಸಂಬಳ ಸಿಗುತ್ತಿದ್ದರೂ ಉದ್ಯಮಿಯಾಗುವ ಕನಸು ಕಂಡಿದ್ದ ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದರು.ಕೆಲಸದ ನಡುವೆಯೇ ರಾತ್ರಿ ಶಾಲೆಗೆ ತೆರಳಿ ಹೋಟೆಲ್ ಮ್ಯಾನೆಜ್‌ಮೆಂಟ್‌ನಲ್ಲಿ ಪದವಿ ಪಡೆದುಕೊಂಡರು.

ಪ್ರಸ್ತುತ ಹುದ್ದೆಗಳು

 • ಆಡಳಿತ ನಿರ್ದೇಶಕ – ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್
 • ಮಾಲಿಕರು – ಶೆಫ್‌ಟಾಕ್ ಕ್ಯಾಟರಿಂಗ್ ಸರ್ವಿಸಸ್
 • ಅಧ್ಯಕ್ಷರು – ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ರಿ. ಉಪ್ಪುಂದ
 • ಮ್ಯಾನೆಜಿಂಗ್ ಟ್ರಸ್ಟೀ – ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ
 • ಫಂಡ್ ರೈಸಿಂಗ್ ಸೆಕ್ರೆಟರಿ – ಶನಿಮಹಾತ್ಮ ಪೂಜಾ ಸಮಿತಿ ಕೋಟೆ ರಿ. ನಲ್ಲಸೊಪರ
 • ಉಪಾಧ್ಯಕ್ಷರು – ಬಿಲ್ಲವ ಅಸೋಸಿಯೇಷನ್ ನಲ್ಲಸೊಪರ
 • ಟ್ರಸ್ಟೀ – ನಾರಾಯಣ ಚಾರಿಟೇಬಲ್ ಟ್ರಸ್ಟ್ ರಿ. ಬೆಂಗಳೂರು
 • ಕಾರ್ಯಕಾರಿ ಸಮಿತಿ ಸದಸ್ಯ – ಭಾರತೀಯ ಸೇವಾದಲ, ಬೈಂದೂರು
 • ಸದಸ್ಯರು – ಬಿಲ್ಲವ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀ
 • ಸದಸ್ಯರು – ಫೆಡರೇಷನ್ ಆಫ್ ಕರ್ನಾಟಕ ಚೇಂಬರ‍್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀ
 • ಸದಸ್ಯರು – ಕ್ಯಾಟರಿಂಗ್ ಅಸೋಸಿಯೇಷನ್ ಮುಂಬೈ
 • ಸದಸ್ಯರು – ಬೆಂಗಳೂರು ಮಹಾನಗರ ಹೋಟೆಲ್ ಅಸೋಸಿಯೇಷನ್ ರಿ.

ಪ್ರಶಸ್ತಿ ಗೌರವಗಳು:

 • ಫಾಸ್ಟೇಸ್ಟ್ ಗ್ರೋವಿಂಗ್ ಪುಡ್ ಸರ್ವಿಸ್ ಕಂಪೆನಿ – ಎಐಎಫ್ 2017
 • ಮೋಸ್ಟ್ ಹೈಜಿನಿಕ್ ಕೆಫೆಟೇರಿಯಾ – ಬಿಎಆರ್‌ಸಿ 2018
 • ಫಾಸ್ಟೆಸ್ಟ್ ಗ್ರೋವಿಂಗ್ ಎಂಟರ್‌ಪ್ರೈಸ್ – ಬಿಸಿಸಿಐ & ಎಚ್‌ಡಿಎಫ್‌ಸಿ ಬ್ಯಾಂಕ್ 2019